Monday, February 4, 2013

ದಾಸ ಸಾಹಿತ್ಯ





ಶ್ರೀ ವಿಜಯಕವಚ


ಶ್ರೀವಿಜಯದಾಸರು


ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ||
ದಾಸರಾಯನ ದಯವ ಸೂಸಿಪಡೆದನ
ದೋಷರಹಿತನ ಸಂತೋಷಭರಿತನ || ||
ಜ್ಞಾನವಂತನ ಬಲುನಿಧಾನಿ ಶಾಂತನ
ಮಾನವಂತನ ಬಲುವದಾನ್ಯ ದಾಂತನ || ||
ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷಸುರಿಸುವ || ||
ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನವಿಷಾದಮರೆತನ || ||
ಇವರ ನಂಬಿದ ಜನಕೆ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು || ||
ಪಾಪಕೋಟಿಯ ರಾಶಿ ಲೇಪವಾಗದೊ
ತಾಪಕಳೆವನೋ ಬಲುದಯಾಪಯೋನಿಧಿ || ||
ಕವನರೂಪದಿ ಹರಿಯ ಸ್ತವನಮಾಡಿದ
ಭುವನ ಬೇಡಿದ ಮಾಧವನ ನೋಡಿದ || ||
ರಂಗನೆಂದನ ಭವವು ಹಿಂಗಿತೆಂದನ
ಮಂಗಳಾಂಗನ ಅಂತರಂಗವರಿತನ || ||
ಕಾಶಿನಗರದಲ್ಲಿದ್ದ ವ್ಯಾಸದೇವನ ದಯವ
ಸೂಸಿಪಡೆದನ ಉಲ್ಲಾಸತನದಲಿ || ||
ಚಿಂತೆ ಬ್ಯಾಡಿರೊ ನಿಶ್ಚಿಂತರಾಗಿರೊ
ಶಾಂತ ಗುರುಗಳ ಪಾದವಂತು ನಂಬಿರೋ || ೧೦ ||
ಖೇದವಾಗದೊ ನಿಮಗೆ ಮೋದವಾಹುದೊ
ಆದಿದೇವನ ಸುಪ್ರಸಾದವಾಹುದೊ || ೧೧ ||
ತಾಪ ತಡೆವನೊ ಬಂದ ಪಾಪ ಕಡಿವನೊ
ಶ್ರೀಪತಿಯಪಾದ ಸಮೀಪವಿಡುವನೋ || ೧೨ ||
ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ
ರಂಗನೊಲಿಯನೊ ಭಕ್ತಸಂಗದೊರೆಯದೇ || ೧೩ ||
ವೇದ ಓದಲು ಬರಿದೆ ವಾದಮಾಡಲು
ಹಾದಿಯಾಗದೊ ಬುಧರ ಪಾದ ನಂಬದೆ || ೧೪ ||
ಲೆಕ್ಕವಿಲ್ಲದಾ ದೇಶ ತುಕ್ಕಿಬಂದರು
ದುಃಖವಲ್ಲದೆ ಲೇಶ ಭಕುತಿ ದೊರೆಯದೊ || ೧೫ ||
ದಾನ ಮಾಡಲು ದಿವ್ಯಗಾನಪಾಡಲು
ಜ್ಞಾನ ದೊರೆಯದೊ ಇವರ ಅಧೀನವಾಗದೆ || ೧೬ ||
ನಿಷ್ಠೆಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟಗುರುಗಳ ಪಾದ ಮುಟ್ಟಿಭಜಿಸಿರೊ || ೧೭ ||
ಪೂಜೆ ಮಾಡಲು ಕಂಡ ಗೋಜುಬೀಳಲು
ಬೀಜಮಾತಿನ ಫಲಸಹಜ ದೊರೆಯದು || ೧೮ ||
ಸುರಸು ಎಲ್ಲರು ಇವರ ಕರವ ಪಿಡಿವರೊ
ತರಳರಂದದಿ ಹಿಂದೆ ತಿರುಗುತಿಪ್ಪರೊ || ೧೯ ||
ಗ್ರಹಗಳೆಲ್ಲವು ಇವರ್ಗೆ ಸಹಾಯ ಮಾಡುತ
ಅಹೋರಾತ್ರಿಲಿ ಸುಖದ ನಿವಹ ಕೊಡುವವೊ || ೨೦ ||
ವ್ಯಾಧಿ ಬಾರದೊ ದೇಹ ಬಾಧೆ ತಟ್ಟದೊ
ಆದಿದೇವನ ಸುಪ್ರಸಾದವಾಹುದೊ || ೨೧ ||
ಪತಿತಪಾಮರ ಮಂದಮತಿಯು ನಾ ಬಲು
ತುತಿಸಲಾಪೆನೆ ಇವರ ಅತಿಶಯಂಗಳ || ೨೨ ||
ಕರುಣದಿಂದಲಿ ಎಮ್ಮ ಪೊರೆವನಲ್ಲದೆ
ದುರಿತಕೋಟಿಯ ಬ್ಯಾಗ ತರಿವ ದಯದಲಿ || ೨೩ ||
ಮಂದಮತಿಗಳು ಇವರ ಚೆಂದವರಿಯದೆ
ನಿಂದೆ ಮಾಡಲು ಭವದಬಂಧ ತಪ್ಪದೊ || ೨೪ ||
ಇಂದಿರಾಪತಿ ಇವರ ಮುಂದೆ ಕುಣಿವನೊ
ಅಂದವಚನವ ನಿಜಕೆ ತಂದು ಕೊಡುವನೊ || ೨೫ ||
ಉದಯ ಕಾಲದಿ ಪದವ ಪಠಿಸಲು
ಮದಡನಾದರು ಜ್ಞಾನ ಉದಯವಾಹುದೊ || ೨೬ ||
ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೊ
ಪಠಿಸಬಹುದಿದು ಕೇಳಿ ಕುಟಿಲರಹಿತರು || ೨೭ ||





ಎದುರಾರೋ ಗುರುವೆ ಸಮನಾರೊ (ಶ್ರೀವ್ಯಾಸರಾಯರು)

ಎದುರಾರೊ ಗುರುವೆ ಸಮನಾರೊ || ||
ಮದನಗೋಪಾಲನ ಪ್ರಿಯ ಜಯರಾಯ || ಅ.ಪ ||
ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ-
ಗಡಣೆಯ ಕೇಳುತ ನುಡಿ ಮುಂದೋಡದೆ
ಗಡಗಡ ನಡುಗುತ ಮಾಯ್ಗೋಮಾಯ್ಗಳು
ಅಡವಿಯೋಳಡಗೋರು ನಿಮ್ಮ ಭೀತಿಯಲಿ || ||

ಕುಟಿಲಮತಗಳೆಂಬೊ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಂತೆಂಬ
ಚಟುಲಾತಪದಿಂದ ಖಂಡಿಸಿ ತೇಜೋ-
ತ್ಕಟದಿ ಮೆರೆದೆ ಬುಧಕಟಕಾಬ್ಜಮಿತ್ರ  || ||

ಅಮಿತದ್ವಿಜಾವಳಿಕುಮುದಗಳರಸಿ
ವಿಮತರ ಮುಖಕಮಲಂಗಳ ಬಾಡಿಸಿ
ಸ್ವಮತರ ಹೃತ್ಸಂತಾಪಗಳೋಡಿಸಿ
ವಿಮಲಸುಕೀರ್ತಿಯ ಪಡೆದೆಯೊ ಚಂದ್ರ || ||
ವೇದಶಾಸ್ತ್ರಗಳೆಂಬೊ ಶೃಂಗಗಳಿಂದ ಸು-
ಧಾದಿಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ತ್ವ-
ಬೋಧೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು || ||

ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವಾರಾಶಿಯೊಳಗಿಟ್ಟು |
ಶ್ರೀಸರ್ವಜ್ಞರ ವಾಕ್ಯಪಾಶದಿ ಸುತ್ತಿ
ಭಾಸುರನ್ಯಾಯಸುಧಾ ಪಡೆದ ಯತೀಂದ್ರ || ||

ವನಜನಾಭನ ಗುಣಮಣಿಗಳು  ಸರ್ವಜ್ಞ-
ಮುನಿಕೃತಗ್ರಂಥಗಳವನಿಯೊಳಡಗಿರೆ ಸ-
ಜ್ಜನರಿಗೆ ಟೀಕಾಂಜನದಿಂದ ತೋರಿಸಿ
ಘನಸುಖಸಾಧನ ಮಾಡಿದ್ಯೊ ಧೀರ || ||

ಅರ್ಥಿಮಂದಾರ ವೇದಾರ್ಥವಿಚಾರ ಸ-
ಮರ್ಥ
ಶ್ರೀಕೃಷ್ಣ ಪಾದಾಂಬುಜಲೋಲ ಪ್ರ-
ತ್ಯರ್ಥಿಮತ್ತೇಭಕಂಠೀರವಾಕ್ಷೋಭ್ಯ-
ತೀರ್ಥಕರಜ ಜಯತೀರ್ಥಯತೀಂದ್ರ || ||


LzÀÄ PÁ°£À ªÀÄAZÀ PÀÄAl ªÀÄ®VzÀÝ

LzÀÄ PÁ°£À ªÀÄAZÀ PÀÄAl ªÀÄ®VzÀÝ|
ªÀÄÆgÀÄ zÀAmÉUÀ¼À£ÀÄß §UÀ°V½¹zÀÝ||

EzÉÝzÀÄ PÁ°UÀÆ PÉÊPÁ®Ä §AvÀÄ|
PÀÄAl ªÀÄ®VzÀÝAvÉ ªÀÄAZÀ zÁ«¹vÀÄ||

DgÀÄ d£À zÁArUÀgÀÄ PÉÊ»rzÀgɼÉzÀÄ|
eÁj ©zÀÝ£ÀÄ PÀÄAn ¥ÀPÉÌ®Ä§Ä ªÀÄÄjzÀÄ||

J¼ÉÊAiÀÄ PÀÄAmÉÊAiÀÄ zÀAmÉ »rzÀ¼ÀÄ|
PÉÆý ºÁqÀĪÀ ¸ÀÄ¥Àæ¨sÁvÀªÀ£ÀÄ PÉüÀÄ||

F LzÀÄ F DgÀÄ F ªÀÄÆgÀÄ ¸ÁPÀÄ|
ºÀ¢£ÉAlÄ ¨ÉÃPÉÆà ©zÀ¨ÉÃPÀÄ ºÀ¢£Á®ÄÌ||



DgÀÄ ¤£ÀV¢gÀ¢üPÀ zsÁgÀÄtÂAiÉƼÀUÉ



DgÀÄ ¤£ÀV¢gÀ¢üPÀ zsÁgÀÄtÂAiÉƼÀUÉ ||¥À||


¸ÁgÀ±Á¸ÀÛçªÀ£ÉÆgÉzÀ ¸ÀªÀðdÕªÀÄÄgÁAiÀÄ ||C.¥À||

DgÉÆAzÀÄ ªÉÊjUÀ¼À vÀjzÀÄ ªÉʵÀÚªÀjUÉ
DgÉgÀqÀÄ HzsÀéð¥ÀÄAqÀæUÀ¼À¤r¹
DgÀÄ ªÀÄÆgÀgÀªÉÄÃ¯É ªÀÄÆgÀ¢üPÀPÀĪÀÄÄvÀUÀ¼À
¨ÉÃgÉÆgÀ¸É QvÉÆÛêÉÄä ©¸ÀÄlAxÀ ¢üÃgÀ ||1||

DgÀÄ£Á®ÄÌ vÀvÀézÀ©üªÀiÁ¤UÀ½UÉÆqÉAiÀÄ
ªÀiÁgÀÄvÀ£À ªÀÄÆgÀ£ÉAiÀÄ CªÀvÁgÀ£É
DgÉÊzÀÄ ªÉÄïÉgÀqÀ C¢üPÀ®PÀëtªÀżÀî
ªÀÄÆgÀÄwAiÀļÉÆ¥ÀÄàwºÀ ªÀÄĤªÀgÉÃtå ||2||

DgÁgÀÄ ªÉÄïÉÆAzÀÄ C¢üPÀ¯ÉPÀÌzÀUÀæAxÀ-
¸ÁgÀªÀ£ÀÄ gÀa¹ ¸ÀdÓ£ÀjVvÀÄÛ
¥ÁgÀªÀiÁyðPÀ¨sÉÃzÀ ¥ÀAZÀPÀªÀ ¸Áܦ¹zÉ
¢üÃgÀ ²æÃPÀȵÀÚ£À zÁ¸ÀgÉƼÀÄ zsÉÆgÉAiÀÄ ||3||

CxÀ𠫪ÀgÀuÉ:    

1. DgÉÆAzÀÄ ªÉÊjUÀ¼À = PÀÄ®, ¹ÛçÃ, zsÀ£À, «zÁå, GzÉÆåÃUÀ, C£Àß, AiÀi˪Àé£ÀUÀ¼ÉA§ (6+1=7) ¸À¥ÀÛªÀÄzÀUÀ¼À£ÀÄß,
2. DgÉgÀqÀÄ HzsÀéð¥ÀÄAqÀæUÀ¼À = zÁézÀ±À£ÁªÀÄUÀ¼ÀÄ (6*2=12),
3.   DgÀÄ ªÀÄÆgÀgÀªÉÄÃ¯É ªÀÄÆgÀ¢üPÀPÀĪÀÄvÀUÀ¼À = E¥ÀàvÉÆÛAzÀÄ zÀĨsÁðµÀåUÀ¼ÀÄ (DgÀĪÀÄÆgÀÄ = 6*3=18. EzÀgÀªÉÄÃ¯É ªÀÄÆgÀ¢üPÀ = 18+3=21)
4.   DgÀÄ£Á®ÄÌ vÀvÀÛ÷éUÀ¼À = 24 vÀvÀÛªÀUÀ¼ÀÄ (DgÀÄ£Á®ÄÌ = 6*4 = 24)
5. DgÉÊzÀÄ ªÉÄïÉgÀqÀÄ C¢üPÀ®PÀë£À = 32 ®PÀëtUÀ½AzÀ G¥ÉÃvÀgÁzÀ (zÁéwæA±À®PÀëtUÀ®Ä) (DgÉÊzÀÄ = 6*5=30) ªÉÄïÉgÀqÀÄ C¢üPÀ = 30+2=32)
6.  DgÁgÀÄ ªÉÄïÉÆAzÀÄ C¢üPÀ¯ÉPÀÌ = 32 ¸ÀASÁåPÀªÁzÀ ¸ÀªÀðªÀÄÆ®UÀæAxÀUÀ¼ÀÄ (DgÁgÀÄ = 6*6=36 ªÉÄïÉÆAzÀ¢üPÀ = 36+1=37),
7. ¨sÉÃzÀ¥ÀAZÀPÀªÀ = ¥ÀAZÀ¨sÉÃzÀUÀ¼ÀÄ, (F±À-fêÀ¨sÉÃzÀ, F±À-dqÀ¨sÉÃzÀ, fêÀ-fêÀ¨sÉÃzÀ, dqÀ-dqÀ¨sÉÃzÀ, ªÀÄvÀÄÛ dqÀ-fêÀ¨sÉÃzÀ)



ಅಂಬಿಗಾ ನಾ ನಿನ್ನ ನಂಬಿದೇ


ಅಂಬಿಗಾ ನಾ ನಿನ್ನ ನಂಬಿದೇ ಜಗದಂಬ ರಮಣ ನಿನ್ನ ನಂಬಿದೇ
ತುಂಬಿದ ಹರಿಗೋಲಂಬಿಗ ಅದ ಕೊಂಬತ್ತು ಛಿದ್ರವು ಅಂಬಿಗಾ
ಸಂಭ್ರಮದಿಂ ನೊಡಂಬಿಗ ಅದರಿಂಬು ನೊಡೀ ನಡೆಸಂಬಿಗಾ ||||
ಹೊಳೆಯ ಭರವ ನೊಡಂಬಿಗಾ ಅದಕೆ ಸೆಳವು ಘನವೈಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ   ||||
ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೊ ಅಂಬಿಗ  ||||
ಸತ್ಯವೆಂಬುದೆ ಹುಟ್ಟಂಬಿಗ ಸದಾ ಭಕ್ತಿಯೆಂಬುದೆ ಪಥವಂಬಿಗಾ
ನಿತ್ಯ ಮುರುತಿ ಪುರಂದರ ವಿಟ್ಠಲ ನಮ್ಮಾ ಮುಕ್ತಿಮಂಟಪಕೊಯ್ಯೊ ಅಂಬಿಗ ||||

ಆರಂಬದಲಿ ನಮಿಪೆ ಬಾಗಿಶಿರವ
ಹೇ ರಂಬ ನೀನೊಲಿದು ನೀಡೆನಗೆ ವರವ

ದ್ವಿರದವದನನೆ ದ್ವಿರದವರದನ ಮಹಿಮೆ
ಹರುಷದಲಿ ಕರ ಜಿಹ್ವೆ ಎರಡರಿಂದ
ಬರೆದು ಪಾಡುವುದಕ್ಕೆ ಬರುವ ವಿಘ್ನವ ತರಿದು
ಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು

ಕುಂಬಿಣಿಜಿಪತಿರಾಮ -ಜಂಬಾರಿ ಧರ್ಮಜರು
ಅಂಬರಾದಿಪ ರಕುತಾಂಬರನೆ ನಿನ್ನ
ಸಂಬ್ರಮದಿ ಪೂಜಿಸಿದರೆಂಬ ವಾರುತಿ ಕೇಳಿ
ಹಂಬಲವ ಸಲಿಸೆಂದು ನಂಬಿ ನಿನ್ನಡಿಗಳಿಗೆ

ಸೋಮಶಾಪದ ವಿಜಿತಕಾಮ ಕಾಮಿತದಾತ
ವಾಮದೇವನ ತನಯ ನೇಮದಿಂದಾ
ಶ್ರಿಮನೊಹರನಾದ ಶ್ಯಾಮಸುಂದರಸ್ವಾಮಿ
ನಾಮನೆನೆಯುವ ಭಾಗ್ಯ ಪ್ರೆಮದಲಿ ಕೊಡು ಎಂದು

ಆವಸಿರ್ಯಲಿ ನೀನು ಎನ್ನ ಮರೆತೆ
ದೇವ ಜಾನಕಿರಮಣ ಪೇಳು ರಘುಹ್ಪತಿಯೆ |||

ಸುರರ ಸೆರೆಯನು ಬಿಡಿಸಿ ಬಂದೆನೆಂಬ ಸಿರಿಯೆ?
ಶರಧಿ ಸೇತುವೆಯ ಕಟ್ಟಿದೆನೆನ್ನುವ ಸಿರಿಯೆ
ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ  |||

ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬ ಸಿರಿಯೆ
ಮೃದ ನಿನ್ನ ಸಖನಾದನೆಂಬ ಸಿರಿಯೆ
ಬಿಡದೆ ದ್ರೌಪದಿ ಮಾನ ಕಾಯ್ದೆನೆಂಬ ಸಿರಿಯೆ
ದೃಢ ವಾಗಿ ಹೇಳೆನಗೆ ದೇವಕಿ ಸುತನೆ ||||

ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ
ಕಾಮ ನಿನ್ನ ಸುತನಾದ ನೆಂಬ ಸಿರಿಯೆ
ಆ ಮಹಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ
ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ||||

ಮನುಜರೆಲ್ಲ್ರು ನಿನ್ನ ಸುತ್ತಿಸುವರೆಂಬ ಸಿರಿಯೆ
ಹನುಮ ನಿನ್ನ ಬಂಟನಾದನೆಂಬ ಸಿರಿಯೆ
ಬಿನುಗುದೈವಗಳು ನಿನಗೆಣ್ಯಿಲ್ಲವೆಂಬ ಸಿರಿಯೆ
ಅನುಮಾನ ಮಾಡದೆ ಪೇಳೊ ನರಹರಿಯೆ  ||||

ಇಂತು ಸಿರಿಯಲಿ ನೀನು ಎನ್ನ ಮರೆತರೆ ಸ್ವಾಮಿ
ಪಂಥವೆ ನಿನಗಿದು ಆವ ನಡತೆ?
ಕಂತುಪಿತ ಕಾಗಿನೆಲೆಯದಿಕೇಶವ ರಂಗ
ಚಿಂತೆಯನು ಬಿಡಿಸಿ ಸಂತೋಷಪಡಿಸೊ ||||

ಅಂಧಂತಮಸು ಇನ್ನಾರಿಗೆ-ಗೋವಿಂದನ ನಿಂದಿಸುವರಿಗೆ  ||||

ಸಂದೇಹವಿಲ್ಲವು ಸಾರಿಸಾರಿಗೆ ವಾಯುನಂದನನ ವಂದಿಸದವರಿಗೆ ||ಅ ಪ||

ಮಾತು ಮಾತಿಗೆ ಹರಿಯ ನಿಂದಿಸಿ-ಸ-
ರ್ವೋತ್ತಮ ಶಿವನೆಂದು ವಾದಿಸಿ
ಧಾತುಗ್ರಂಥಗಳೆಲ್ಲ ತೋರಿಸಿ-ವೇ-
ದಾಂತ ಪ್ರಮಾಣಗಳ ಹಾರಿಸಿ
ಸೋತು ಸಂಕಟಪಟ್ಟು ಘಾತಕ ಒಡಲೊಳಗಿಟ್ಟು
ನೀತಿ ಹೇಳುವ ಕೆಟ್ಟ ಜಾತಿಗಳಿಗಲ್ಲದೆ  ||||

ಮೂಲಕವತಾರಕ್ಕೆ ಭೇದವು-ಮುಖ್ಯ
ಶೀಲಪಂಡಿತರಿಳಗೆ ಅತಿ ವಾದವು
ಲೀಲಾಸಾದೃಶ್ಯವ ತೋರುತ-ಲಿಂಗ-
ಭಂಗವಿಲ್ಲದ ದೇಹ ಹಾರುತ
ಮೂಲಗುರುವು ಕುಂತೀಬಾಲನೆನ್ನದೆ ವೃಥಾ
ಶೀಲಗೆಟ್ಟಂಥ ಖಳರಿಗಲ್ಲದೆ ಮತ್ತೆ ||||

ವ್ಯಾಸರ ಮಾತುಗಳಾಡುತ-ವಿ-
ಶ್ವಾಸಘಾತಕತನ ಮಾಡುತ
ದೋಷವೆಂದರೆ ನುಡಿ ಕೇಳದೆ-ಸಂ-
ತೋಷವೆಂದರೆ ನೋಡಿ ಬಾಳದೆ
ಶೇಷಶಯನ ಆದಿಕೇಶವರಾಯನ
ದಾಸರೊಡೆಯ ಮಧ್ವ ದ್ವೇಷಿಗಳಿಗಲ್ಲದೆ ||||



ಆರು ಬಾಳಿದರೇನು ಆರು ಬದುಕಿದರೇನು
ನಾರಯಣನ ಸ್ಮರಣೆ ನಮಗಿಲ್ಲದನಕ ||||

ಉಣ್ಣಬರದವರಲ್ಲಿ ಊರೂಟವಾದರೆ ಏನು
ಹಣ್ಣು ಬಿಡದ ಮರಗಳು ಹಾಳಾದರೇನು
ಕಣ್ಣಿಲ್ಲದವಗಿನ್ನು ಕನ್ನಡಿಯಿದ್ದು ಫಲವೇನು
ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು ||||

ಅಕ್ಕರಿಲ್ಲದವರಿಗೆ ಮಕ್ಕಳಿದ್ದು ಫಲವೇನು
ಹೊಕ್ಕು ನಡೆಯದ ನಂಟತನದೊಳೇನು
ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು
ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು ||||

ಅಲ್ಪದೊರೆಗಳ ಜೀತ ಎಷ್ತು ಮಾಡಿದರೇನು
ಬಲ್ಪಂಥವಿಲ್ಲದವನ ಬಾಳ್ವೆಯೇನು
ಕಲ್ಪಕಲ್ಪಿತ ಕಾಗಿನೆಲೆಯಾದಿ ಕೇಶವನ
ಸ್ವಲ್ಪವೂ ನೆನೆಯದ ನರನಿದ್ದರೇನು ||||


ಅಪರಾಧಿ ನಾನಲ್ಲ ಅಪರಾಧವೆನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ

ನೀನೇ ಆಡಿಸದಿರಲು ಜಡ ಒನಿಕೆಯ ಬೊಂಬೆ
ಏನುಮಾಡಲು ಬಲ್ಲದು ತಾನೆಬೇರೆ
ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲುಗಳು
ನೀನೇ ಮುಗ್ಗಿಸಲು ಮುಗ್ಗುವ ದೇಹದವನು ||||

ಒಂದೆಂಟು ಬಾಗಿಲ ಪಟ್ಟಣಕ್ಕೆ ತನ್ನ
ದೆಂದು ಇಪ್ಪತ್ತಾರು ಮನೆಯಾಳ್ಗಳ
ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟು
ಮುಂದೆ ಭವದಲಿ ಬವಣಿಪುದನ್ಯಾಯ  ||||

ಯಂತ್ರವಾಹಕ ನೀನೇ ಒಳಗಿದ್ದು ಎನ್ನ ಸ್ವ
ತಂತ್ರನೆಂದೆನಿಸಿ ಕೊಲಿಸುವರೆ ಹೇಳೊ
ಕಂತುಪಿತ ಲಕ್ಷ್ಮೀಶ ಎಂತಾಡದಂತಹುದಾ
ನಂತಮೂರುತಿ ನಮ್ಮ ಪುರಂದರವಿಠಲ ||||

ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯಾ
ಬಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ

ದ್ವಿಜಕುಲಾಬ್ದಿಗೆ ಪೂರ್ಣದ್ವಿಜರಾಜನೆಂದೆನಿಪ
ವಿಜಯವಿಟ್ಟಲದಾಸರೋಲುಮೆ ಪಾತ್ರ
ನಿಜಮನದಿ ನಿತ್ಯದಲಿ ಭುಜಗಶಯನನ ಪಾದ
ಭಜಿಪಭಾಗ್ಯದಿ ನಲಿವ ಸುಜನರೊಳಿಡು ಎಂದು

ನೀನೆವೆ ಗತಿ ಎಂದ ದೀನರಿಗೆ ನಾನೆಂಬ
ಹೀನಮತಿ ಕಳೆದು ಪವಮಾನಪಿತನ
ದ್ಯಾನಗೈಯ್ಯುವ ದಿವ್ಯಜ್ಣಾನ ಮಾರ್ಗವ ತೋರಿ
ಸಾನುರಾಗದಿ ಪೊರೆವ ದಾನಿ ದಯವಾರಿಧಿಯೋ

ಮಂದಜನಸಂದೊಹ ಮಂದಾರತರು ವಿಜಿತ
ಕಂದರ್ಪ ಕಾರುಣ್ಯಸಿಂದು ಬಂದೋ
ಕಂದನೆಂದರಿದೆನ್ನ ಕುಂದು ಎಣಿಸದೆ ಹ್ರದಯ
ಮಂದಿರದಿ ಶ್ರೀ ಶ್ಯಾಮಸುಂದರನ ತೋರೆಂದು



ಬಾರೊ ನಮ್ಮ ಮನೆಗೆ ಗೋಪಾಲಕೃಷ್ಣ  ||||

ಗೊಲ್ಲಬಾಲಕರನು ನಿಲ್ಲಿಸಿ ಪೆಗಲೇರಿ |
ಗುಲ್ಲುಮಾಡದೆ ಮೊಸರೆಲ್ಲ ಕುಡಿದ ಕೃಷ್ಣ ||||

ಮೂಜ್ಜಗವನೆಲ್ಲ ಬೊಜ್ಜೆಯೊಳಗೆ ಇಟ್ಟು |
ಗೆಜ್ಜೆಯಕಚ್ಚಿ ತಪ್ಹೆಜ್ಜೆಯನಿಕ್ಕುತ  ||||

ಅಂಗನೇಯರ ವ್ರತ ಭಂಗವ ಮಾಡಿದ |
ರಂಗವಿಠಲ ಭವಭಂಗವ ಮಾಡುವ  ||||

ಏನಾಯಿತೊ ಈ ಜನಕೆ |
ಮೌನವನು ಹಿಡಿದು ಮರೆತರು ಹರಿಯ  ||||

ನಾಲಿಗೆ ಮುರಿದಿತೊ ನೆಗ್ಗಿನ ಕೊನೆಮುಳ್ಳು |
ಬಾಲಕತನದಿ ಭೂತ ಹಿಡಿಯಿತೊ ||
ಮೇಲೆ ಕೆಲೆಗಿನ ತುಟಿ ಎರಡು ಒಂದಾಯಿತೊ |
ಕಾಲಮೃತ್ಯುವು ಬಂದು ಕಂಗೆಡಿಸಿತೊ  ||||

ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೋ |
ಕಟಕರಿಸಿ ನಾಲಿಗೆ ಕಡಿದ್ಹೋಯಿತೋ ||
ಹಟದಲ್ಲಿ ಹರಿಯನ್ನು ನೆನೆಯದೆ ಇರುವಂಥ |
ಕುಟಿಲ ಚಂಚಲ ಮನಸು ಕೂಡಿ ಬಾಧಿಸಿತೊ ||||

ಹರಿಯೆಂದರಿವರ ಶಿರ ಹರಿದು ತಾ ಬೀಳುವುದೆ |
ಹರಿನಾಮ ಹಣೆಯಲ್ಲಿ ಬರೆದಿಲ್ಲವೆ ||
ವರದ ಪುರಂದರವಿಠಲರಾಯನ್ನ |
ಸ್ಮರಿಸಿದರೆ ಸಿಡಿಲೆರಗಿ ಕೊಲ್ಲುವುದೇ ||||


ಭಂಗಾರವಿಡಬಾರೆ | ನಿನಗೊಪ್ಪುವ | ಭಂಗಾರವಿಡಬಾರೆ  ||||

ರಂಗನಾಥನ ದಿವ್ಯ | ಮಂಗಳ ನಾಮವೆಂಬ | ಭಂಗಾರವಿಡಬಾರೆ ||ಅ ಪ||

ಮುತೈದೆತನವೆಂಬ ಮುಖದಲಿ ಕುಂಕುಮದ | ಕಸ್ತುರಿಯ ಬೊಟ್ಟನಿಡೆ |
ನಿನ್ನ ಫಣೆಗೆ | ಕಸ್ತುರಿಯ ಬೊಟ್ಟನಿಡೆ |
ಹೆತ್ತವರ ಕುಲಕೆ ಕಂದು ಬಾರದ ಹಾಗೆ | ಮುತ್ತಿನ ಮೂಗುತಿಯನಿಡೆ |
ಕರ್ತೃಪತಿಯ ಮಾತು ಮೀರಬಾರದು ಎಂಬ | ಮುತ್ತಿನೋಲೆ ಕೊಪ್ಪನಿಡೆ |
ನಿನ್ನ ಕಿವಿಗೆ | ಮುತ್ತಿನೋಲೆ ಕೊಪ್ಪನಿಡೆ |
ಹತು ಮಂದಿಯ ಕೈಲಿ ಹೌದೌದೆನಿಸಿಕೊಂಬ | ಮಸ್ತಕಮುಕುಟವಿಡೆ  ||||

ಅರೆಗಳಿಗೆ ಪತಿಯ ಅಗಲಬಾರದು ಎಂಬ | ಅಚ್ಚ ಮಂಗಲಸೂತ್ರ ಕಟ್ಟೆ |
ನಿನ್ನ ಕೊರಳಿಗೆ | ಅಚ್ಚ ಮಂಗಲಸೂತ್ರ ಕಟ್ಟೆ |
ಪರಪುರುಷರನು ನಿನ್ನ ಪಡೆದ ತಂದೆಯೆಂಬ | ಪದಕಸರವಹಾಕೆ |
ಕರದೊಬ್ಬರಿಗೆ ಅನ್ನವಿಕ್ಕುವೆನೆಂತೆಂಬ | ಹರಡಿ ಕಂಕಣವನಿಡೆ |
ನಿನ್ನ ಕೈಗೆ | ಹರಡಿ ಕಂಕಣವನಿಡೆ |
ನೆರೆಹೊರೆಯವರೆಲ್ಲ ಸರಿಯೆಂಬಂಥ | ಬಿರುದಿನೊಡ್ಯಣವಿಡೆ ||||

ಮಾನ ಹೊರಗೆ ಬಿಚ್ಚೆನೆಂಬ ಕಂಭಾವತಿಯ | ನೇಮದ ಮಡಿಯನುಡೆ |
ನಿನ್ನ ಮೈಗೆ | ನೇಮದ ಮಡಿಯನುಡೆ ||
ಹೀನ ಗುಣವ ಬಿಟ್ಟು ಹಿತದಲ್ಲಿದ್ದೇನೆಂಬ | ಹೆಚ್ಚಿನ ಕುಪ್ಪಸ ತೊಡೆ |
ಜ್ಞಾನನಿಧಿಗಳಾದ ಗುರುಗಳ ಪಾದ | ಕ್ಕಾನತಳಾಗಿ ಬಾಳೆ |
ಗುರುಗಳ ಪಾದ | ಕ್ಕಾನತಳಾಗಿ ಬಾಳೆ |
ಮೌನಿಗಳೊಡೆಯ ಶ್ರೀಪುರಂದರವಿಠಲನ | ಪ್ರೇಮ ಸೆರಗಿಲಿ ಕಟ್ಟೆ ||||

ಬಣ್ಣಿಸಿ ಹರಸಿದಳು ಗೊಪಿ ತಾ | ||||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ||

ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಾಯದ ಖಳರ ಮರ್ದನನಾಗು|
ರಾಯರಪಾಲಿಸು ರಕ್ಕಸರ ಸೋಲಿಸು |
ವಾಯುಸುತಗೆ ನೀ ನೊಡೆಯನಾಗೆನುತ  ||||

ಧೀರನು ನೀನಾಗು ದಯಂಬುಧಿಯಾಗು |
ಆ ರುಗ್ಮಿಣಿಗೆ ನೀನರಸನಾಗು ||
ಮಾರನ ಪಿತನಾಗು ಮಧುಸೂದನನಾಗು |
ದ್ವಾರವತಿಗೆ ನೀ ದೊರೆಯಾಗೆನುತ ||||

ಆನಂದ ನೀನಾಗು ಅಚ್ಯುತ ನೀನಾಗು |
ದನವಾಂತಕನಾಗು ದಯವಾಗು ||
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಞಾನಿ ಪುರಂದರವಿಠಲನಾಗೆನುತ ||||
  


ಭಾಗ್ಯದ ಲಕ್ಷ್ಮೀ ಬಾರಮ್ಮ | ನಮ್ಮಮ್ಮ ನೀ ಸೌ
ಭಾಗ್ಯದ ಲಕ್ಷ್ಮೀ ಬಾರಮ್ಮ  ||||

ಗೆಜ್ಜೆಕಾಲ್ಗಳ ಧ್ವನಿಯ ಮಾಡುತ | ಹೆಜ್ಜೆಯ ಮೆಲೆ ಹೆಜ್ಜೆಯನಿಕ್ಕುತ|
ಸಜ್ಜನ ಸಾಧು ಪೂಜೆಯ ವೇಳೆಗೆ | ಮಜ್ಜಿಗೆಯೊಳಗಿನ ಬೆಣ್ಣೆಯಂತೆ || ||

ಕನಕವೃಷ್ಟಿಯ ಕರೆಯುತ ಬರೆ | ಮನಕೆ ಮಾನವ ಸಿದ್ಧಿಯ ತೋರೆ |
ದಿನಕರ ಕೋಟಿ ತೇಜದಿ ಹೋಳೆಯುವ | ಜನಕರಾಯನ ಕುಮಾರಿ ಬೇಗ || ||

ಅತ್ತಿತ್ತಗಲದೆ ಭಕ್ತರ ಮನೆಯಲಿ | ನಿತ್ಯ ಮಹೋತ್ಸವ ನಿತ್ಯ ಸುಮಂಗಳ|
ಸತ್ಯವ ತೋರುವ ಸಾಧು ಸಜ್ಜನರ | ಚಿತ್ತದಿ ಹೊಳೆವ ಪುತ್ತಳಿ ಬೊಂಬೆ || ||

ಸಂಖ್ಯೆ ಯಿಲ್ಲದ ಭಾಗ್ಯವ ಕೊಟ್ಟು | ಕಂಕಣ ಕೈಯ ತಿರುವುತ ಬರೆ|
ಕುಂಕುಮಾಂಕಿತೆ ಪಂಕಜ ಲೋಚನೆ | ವೇಂಕಟರಮಣನ ಬಿಂಕದ ರಾಣಿ ||||

ಸಕ್ಕರೆ ತುಪ್ಪ ಕಾಲಿವೆ ಹರಿಸಿ | ಶುಕ್ರವಾರದ ಪೂಜೆಯ ವೇಳೆಗೆ |
ಅಕ್ಕರವುಳ್ಳ ಅಳಗಿರಿ ರಂಗನ | ಚೊಕ್ಕ ಪುರಂದರ ವಿಠಲನ ರಾಣಿ ||||


ಬ್ರಹ್ಮಾಂಡದೊಳಗೆ ಅರಸಿ ನೋಡಲು | ನಮ್ಮೂರೇ ವಾಸಿ  ||||

ರಮ್ಮೆಯರಸನು ಸರ್ವದ ವಾಸಿಪ | ಸುಮ್ಮಾನದಿ ತಾನು  ||ಅ ಪ||

ಜನನ ಮರಣವಿಲ್ಲ | ಅಲ್ಲಿ | ಉಣುವ ದುಃಖವಿಲ್ಲ ||
ಅನುಜ ತನುಜರು ಅಲ್ಲಿಲ್ಲ | ಅನುಮಾನದ ಸೊಲ್ಲೇ ಇಲ್ಲ  ||||

ನಿದ್ರೆಯು ಅಲ್ಲಿಲ್ಲ | ರೋಗೋ | ಪದ್ರಗಳಲ್ಲಿಲ್ಲ ||
ಕ್ಷುದ್ರಜನಂಗಳು ಅಲ್ಲಿಲ್ಲ | | ಮುದ್ರಶಯನ ಬಲ್ಲ ಎಲ್ಲ  ||||

ಸಾಧುಜನರ ಕೂಡೆ | ಮೋಕ್ಷಕೆ | ಸಾಧನೆಗಳ ಮಾಡೆ ||
ಮಾಧವ ಪುರಂದರವಿಠಲರಾಯನು | ಆದರಿಸುವನಲ್ಲೆ ಬಲ್ಲೆ ||||
  



ದೇವಿ ಅಂಬುಜವಲ್ಲಿ ರಮಣನೆ ಭೂವರಾಹದಯಾನಿಧೆ  ||||

ಪವಮಾನನ ದಿವ್ಯ ಕರದಲಿ ಸೇವೆಸಂತತಗೊಳ್ಳುವಿ  ||ಅ ಪ||

ಅವನಿಯೊಳು ಶ್ರೀಮುಷ್ಣ ಕ್ಷೇತ್ರದಿ ನೀ ವಿಹಾರವ ಮಾಡುವಿ |
ಭವ ವಿಮೋಚನ ಭಕ್ತವತ್ಸಲ ಕವಿಗಳಿಗೆ ಕರುಣಾಕರ ||||

ಅತ್ಯಗಾದ ಸುಶೀಲ ಜಾಹ್ನವಿ ಸುತ್ತು ಷೋಡಶತೀರ್ಥದಿ |
ನಿತ್ಯ ಪುಷ್ಕರಣಿಯ ಗರ್ಭದಿ ನಿತ್ಯ ಇರುವುದು ಕಂಡೆ ನಾ  ||||

ಮತ್ತು ವರ್ಣಿಪೆ ತೀರ್ಥತಟದಲಿ ಉತ್ತಮಾಗ್ನೇಯಭಾಗದಿ |
ಚಿತ್ತವೇದ್ಯದಿ ಕಲ್ಪತರು ಅಶ್ವತ್ಥರೂಪದಿ ಇರುವನ  ||||

ಕರಗಳೆರಡನು ಕಟಿಯಲಿಟ್ಟು ಕೋರೆಹಲ್ಲನೆ ತೋರುತ |
ಧರಿಸಿ ಚಿನ್ಮಯ ಸಾಲಿಗ್ರಾಮದ ಸರವು ಈಪರಿ ಬೆಳಗುತ |||

ಘನ್ನ ಶ್ವೇತವರಾಹಮೂರುತಿ ಎನ್ನ ಪೂರ್ವದಿ ಪುಣ್ಯದಿ |
ನಿನ್ನ ಶುಭಕರ ಪಾದಪಂಕಜವನ್ನು ಕಂಡೆನು ಇಂದು ನಾ |||

ಸುಂದರಾನನ ಕಂಜಮಧುಪನ ಇಂದು ನೋಡಿದ ಕಾರಣ |
ಬಂದ ದುರಿತಗಳೆಲ್ಲ ಹೋದವು ಚೆಂದ ಶುಭಕರವಾದವು ||||

ಮಲ್ಲಮರ್ದನ ವೈಕುಂಠದಿಂದ ಮೆಲ್ಲಮೆಲ್ಲನೆ ಬಂದೆಯ |
ಝಲ್ಲಿಕಾವನದಲ್ಲಿ ಕುಳಿತು ಎಲ್ಲ ಭಕ್ತರ ಸಲಹುವಿ ||||

ಸೂಕರಾಸ್ಯನೆ ನಿನ್ನ ಪಾದಕನೇಕ ವಂದನೆ ಮಡುವೆ |
ಶೋಕಹರ ಗೋಪಾಲವಿಠಲ ನೀ ಕರುಣಿಸಿ ರಕ್ಷಿಸೊ ||||




 


ಏಳೇಳು ಶರಧಿಯು ಏಕವಾಗಿದೆ ಕಂಡ್ಯ |
ಹೇಗೆ ಬಂದೆ ಹೇಳೋ ಕೋತಿ || ||||
ಏಳು ಶರಧಿಯು ಎನಗೆ ಏಳು ಕಾಲುವೆಯು |
ತೂಳಿ ಲಂಘಿಸಿ ಬಂದೆ ಭೂತ  ||ಅ ಪ||

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ |
ಹೇಗೆ ಬಿಟ್ಟರು ಹೇಳೊ ಕೋತಿ ||
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ |
ಮಾತಾಡಿ ಬಂದೆನೊ ಭೂತ  ||||

ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು |
ಹೇಗೆ ಬಿಟ್ಟಳು ಹೇಳೊ ಕೋತಿ ||
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು |
ಬಿಂಕದಿಂದಲಿ ಬಂದೆ ಭೂತ ||||

ಕೊಂಬೆಕೊಂಬೆಗೆ ಕೋಟಿಮಂದಿ ರಾಕ್ಷಸರಿರೆ |
ಹೇಗೆ ಬಿಟ್ಟರು ಪೇಳೊ ಕೋತಿ ||
ಕೊಂಬೆ ಕೊಂಬೆಗೆ ಕೋಟಿಮಂದಿ ರಾಕ್ಷಸರನ್ನು |
ಕೊಂದ್ಹಾಕಿ ಬಂದೆನೊ ಭೂತ ||||

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು |
ಯಾಕೆ ಬಂದೆ ಹೇಳೊ ಕೋತಿ ||
ಯಾವ ವನದೊಳಗೆ ಜಾನಕಿದೇವಿ ಇದ್ದಾಳೊ |
ಅವಳ ನೋಡಬಂದೆ ಭೂತ ||||

ದಕ್ಷಿಣಪುರಿ ಲಂಕದಾನವರಿಗಲ್ಲದೆ |
ತ್ರ್ಯಕ್ಷಾದ್ಯರಿಗಳವಲ್ಲ ಕೋತಿ ||
ಪಕ್ಷಿಧ್ವಜ ರಾಮನ ಅಪ್ಪಣೆಯೆನಗಿಲ್ಲ |
ಈಕ್ಷಣ ತಪ್ಪಿಸಿಕೊಂಡೆ ಭೂತ ||||

ದೂತನಗಿಹೆ ಎನ್ನ ಕೈಯೊಳು ಸಿಕ್ಕಿಹೆ |
ಕೋಪವಿನ್ನೇತಕ್ಕೊ ಕೋತಿ ||
ನಾ ತಾಳಿಕೊಂಡಿಹೆನೋ ಈ ಕ್ಷಣದಿ ಲಂಕೆ |
ನಿರ್ಧೂಮವನು ಮಾಳ್ಪೆ ಭೂತ ||||

ನಿಮ್ಮಂಥ ದಾಸರು ನಿಮ್ಮರಸನ ಬಳಿ |
ಎಷ್ಟು ಮಂದಿದ್ದಾರೆ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು |
ಕೋಟ್ಯಾನುಕೋಟಿಯೊ ಭೂತ ||||

ಎಲ್ಲಿಂದ ನೀ ಬಂದೆ ಏತಕ್ಕೆಲ್ಲರ ಕೊಂದೆ |
ಯಾವರಸನ ಬಂಟ ಕೋತಿ ||
ಚೆಲ್ವಯೋದ್ಯಾಪುರದರಸು ಜಾನಕಿಪತಿ |
ರಾಮಚಂದ್ರನ ಬಂಟ ಭೂತ ||||

ಸಿರಿರಾಮಚಂದ್ರನು ನಿನ್ನರಸನಾದರೆ |
ಆತ ಮುನ್ನಾರ‍್ಹೇಳೋ ಕೋತಿ |
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ ಶ್ರೀ |
ಪುರಂದರವಿಠಲನೊ ಭೂತ ||||


ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡು ತಿಹಳು ||||

ಕೋಟಿ ಕೋಟಿ ಭೃತ್ಯರಿರಲು | ಹಾಟಕಾಂಬರನ ಸೇವೆ |
ಸಾಟಿಯಿಲ್ಲದೆ ಮಾಡಿ | ಪೂರ್ಣ ನೋಟದಿಂದ ಸುಖಿಸುತಿಹಳು ||||

ಛತ್ರ ಚಾಮರ ವ್ಯಜನ ಪರಿಯಂಕ | ಪಾತ್ರ ರೂಪದಲ್ಲಿ ನಿಂತು ||
ಛಿತ್ರ ಚರಿತನಾದ ಹರಿಯ | ನಿತ್ಯ ಸೇವೆ ಮಾಡುತಿಹಳು ||||

ಸರ್ವತ್ರದಿ ವ್ಯಾಪ್ತನಾದ | ಸರ್ವ ದೋಷರಹಿತನಾದ ||
ಸರ್ವ ವಂದ್ಯನಾದ ಪುರಂದರ ವಿಟ್ಠಲನ್ನ ಸೇವಿಸುವಳೊ ||||


ಗರುಡ ಗಮನ ಬಂದನೋ ನೋಡಿರೊ ಬೇಗ
ಗರುಡ ಗಮನ ಬಂದನೋ ||||

ಗರುಡ ಗಮನ ಬಂದ ಧರಣಿಯಿಂದೊಪ್ಪುತ  
ಕರೆದು ಬಾರೆನ್ನುತ ವರಗಳ ಬೀರುತ  ||ಅ ಪ||

ಎನ್ನ ರಕ್ಷಿಪ ದೊರೆ ಇಲ್ಲಿಗೆ ತಾ ಬಂದ
ಚಿನ್ನವ ಪೋಲುವ ವಿಹಂಗಜ ರಥದಲ್ಲಿ
ಘನ್ನಮಹಿಮ ಬಂದ ಬಿನ್ನ ಮೂರುತಿ ಬಂದ
ಸಣ್ಣ ಕೃಷ್ಣ ಬಂದ ಬೆಣ್ಣೆ ಕಳ್ಳ ಬಂದ || 1 ||

ಪಕ್ಷಿವಾಹನ ಬಂದ ಲಕ್ಷ್ಮೀಪತಿಯು ಬಂದ
ಕುಕ್ಷಿಯೊಳಗೆ ಜಗವನಿತ್ತವಾ ತಾ ಬಂದ
ಸೂಕ್ಷ್ಮ ಸ್ಥೂಲದೊಳು ಇಪ್ಪಾನು ತಾ ಬಂದ
ಸಾಕ್ಷಿಭೂತ ಅವ ಸರ್ವೇಶ್ವರ ಬಂದ || 2 ||

ತಂದೆ ಪುರಂದರ ವಿಠಲರಾಯ ಬಂದ
ಬಂದು ನಿಂತು ನಲಿದಾಡಿದನೂ
ಸಿಂಧುಶಯನ ಬಂದ ಅಂದು ಸಂದೀಪನ
ನಂದನ ತಂದಿತ್ತ ಆನಂದ ಮೂರುತಿ ಬಂದ || 3 ||
 

ಗೋಪಿಯ ಭಾಗ್ಯವಿದು |
ಶ್ರೀಪತಿ ತಾ ಶಿಶು ರೂಪಿನಲ್ಲಿರುವುದು ||||

ಕಡುಮುದ್ದು ರಂಗನ ತೊಡೆಯಮೇಲೆತ್ತುತ |
ಜಡೆಯ ಹೆಣೆದು ಹೂ ಮುಡಿಸಿ ಬೇಗ ||
ಬಿಡದೆ ಮುತ್ತಿನ ಚೆಂದರೆಳೆಯನು |
ಸಡಗರದಿಂದಲಂಕರಿಸಿದಳು ||||

ನಿತ್ಯ ನಿರ್ಮಲನಿಗೆ ನೀರನೆರದು ತಂ |
ದೆತ್ತಿ ತೊಡೆಯೊಳಿಟ್ಟು ಮೊಲೆಯೂಡಿ ||
ಮುತ್ತು ಕೊಟ್ಟು ಬಲು ವಿಧದಿಂದಾಡಿಸಿ |
ಅರ್ತಿಯಿಂದಲಿ ತಾ ತೂಗಿದಳು  ||||

ದೃಷ್ಟಿ ತಾಗಿತೆಂದಿಟ್ಟು ವಿಭೂತಿಯ |
ತಟ್ಟೆಯೊಳಾರತಿಗಳ ಬೆಳಗಿ ||
ಥಟ್ಟನೆ ಉಪ್ಪು ಬೇವು ನಿವಾಳಿಸಿ |
ತೊಟ್ಟಿಲೊಳಿಟ್ಟು ತಾ ತೂಗಿದಳು ||||

ಎಮ್ಮಯ್ಯ ರನ್ನನೆ ಸುಮ್ಮನಿರೋ ದೊಡ್ಡ |
ಗುಮ್ಮನು ಬರುವನು ಅಳಬೇಡ ||
ಸುಮ್ಮನೆ ಇರು ನಿನಗಮ್ಮಿಕೊಡುವೆನೆಂದು |
ಬೊಮ್ಮನ ಪಿತನ ತಾ ತೂಗಿದಳು  ||||

ಮಾಧವ ಜೋ ಮಧುಸೂದನ ಜೊ ಜೋ |
ಯಾದವರಾಯ ಶ್ರೀರಂಗನೆ ಜೋ ||
ಆದಿ ಮೂರುತಿ ನಮ್ಮ ಪುರಂದರವಿಠಲನ |
ಆದರದಿಂದ ತಾ ತೂಗಿದಳು  ||||

ಹರಿ ಹರಿಯೆನ್ನಲಿಕ್ಕೆ ಹೊತ್ತಿಲ್ಲ |
ನರಜನ್ಮ ವ್ಯರ್ಥವಾಗಿ ಹೋಗುತದಲ್ಲ ||||

ಹರಿಜಾಗರಣೆಯಲ್ಲಿ ಪಾರಣೆ ಚಿಂತೆ |
ನಿರತ ಯಾತ್ರೆಯಲ್ಲಿ ಶಾಕದ ಚಿಂತೆ ||
ಸರುತ ಸತ್ಕಾರ್ಯದಿ ಧನದ ಮೇಲಿನ ಚಿಂತೆ |
ಪುರಾಣ ಕೇಳ್ವಾಗ ಗೃಹದ ಚಿಂತೆ ||||

ಕರ್ಮದಿ ಒಂದು ಚಿಂತೆ ಧರ್ಮದಿ ಒಂದು ಚಿಂತೆ |
ಪೆರ್ಮನ ಮಾಡಲು ಬಲು ಚಿಂತೆ ||
ಮರ್ಮ ವೈರದಿ ಚಿಂತೆ ಈರ್ಮನಸ್ಸಾಗೆ ಚಿಂತೆ |
ದುರ್ಮದದಿ ನಡೆಯ ಪ್ರಾಣದ ಚಿಂತೆ ||||

ಗಂಗೆ ಮುಳುಗುವಾಗ ಚೆಂಬುಮೇಲಿನ ಚಿಂತೆ |
ಸಂಗಡದವರು ಪೋಗುವ ಚಿಂತೆ |
ಪನ್ನಗಶಯನ ಶ್ರೀ ಪುರಂದರವಿಠಲನ್ನ |
ಹಿಂಗದೆ ಭಜಿಸಲು ಸತತ ನಿಶ್ಚಿಂತೆ ||||


ಹರಿಯ ನೆನೆಯದ ನರಜನ್ಮವೇಕೆ | ನರ |
ಹರಿಯ ಕೊಂಡಾಡದ ನಾಲಿಗೆಯೇಕೆ ||||

ವೇದವನೋದದ ವಿಪ್ರ ತಾನೇಕೆ |
ಕಾದಲರಿಯದ ಕ್ಷತ್ರಿಯನೇಕೆ ||
ಕ್ರೋಧವ ಬಿಡದ ಸಂನ್ಯಾಸಿ ತಾನೇಕೆ |
ಆದರವಿಲ್ಲದ ಅಮೃತಾನ್ನವೇಕೆ ||||

ಸತ್ಯಶೌಚವಿಲ್ಲದಾಚಾರವೇಕೆ |
ನಿತ್ಯ ನೇಮವಿಲ್ಲದ ಜಪತಪವೇಕೆ ||
ಭಕ್ತಿಲಿ ಮಾಡದ ಹರಿಪೂಜೆಯೇಕೆ |
ಉತ್ತಮರಿಲ್ಲದ ಸಭೆಯು ತಾನೇಕೆ ||||

ಮಾತಪಿತರ ಪೊರೆಯದ ಮಕ್ಕಳೇಕೆ |
ಮಾತುಕೇಳದ ಸೊಸೆಗೊಡವೆ ತಾನೇಕೆ ||
ನೀತಿ ನೇರಿಲ್ಲದ ಕೂಟ ತಾನೇಕೆ | |
ನಾಥನಾದ ಮೇಲೆ ಕೋಪವದೇಕೆ ||||

ಅಳಿದು ಅಳಿದು ಹೋಗುವ ಮಕ್ಕಳೇಕೆ |
ತಿಳಿದು ಬುದ್ಧಿಯ ಹೇಳದ ಗುರುವೇಕೆ ||
ನಳಿನನಾಭ ಶ್ರೀ ಪುರಂದರವಿಠಲನ |
ಚೆಲುವ ಮೂರುತಿಯ ನೋಡದ ಕಂಗಳೇಕೆ ||||


ಹೊಂದಿ ಬದುಕಿರೊ ರಾಘವೇಂದ್ರ ರಾಯರ ||||

ಕುಂದದೆಮ್ಮನು ಕರುಣದಿಂದ ಪೊರೆವರ ||ಅ ಪ||

ನಂಬಿ ತುತಿಸುವ ನಕದಂಬಕಿಷ್ಟವ
ತುಂಬಿ ಕೊಡುವರು ಅನ್ಯರ್ಹಂಬಲೀಯನು  ||||

ಅಲವಬೋಧರ ಸಮತಜಲಧಿಚಂದಿರ
ಒಲಿದು ಭಕ್ತರ ಕಾಯ್ವ ಸುಲಭ ಸುಂದರ ||||

ಗುರು ಸುಧಿಂದ್ರರ ವಿಮಲಕರಜರೆನಿಪರ
ಸ್ಮರಿಸಿ ಸುರುಚಿರ ವಿಮಲಚರಣ ಪುಷ್ಯರ ||||

ಘಾಲಲೋಚನ ವಿನುತ ಮೂಲರಾಮನ
ಲೀಲೆಯನುದಿನ ತುತಿಪ ಶೀಲ ಸದ್ಗುಣ ||||

ಭೂತ ಭಾವನ ಜಗನ್ನಾಥವಿಠಲನ
ಪ್ರೀತಿಪಾತ್ರನ ನಂಬಿರೀತನುದಿನ ||||


ಇಷ್ಟು ದಿನ ಈ ವೈಕುಂಠ ಎಷ್ಟು ದೂರವೊ ಎನ್ನುತಲಿದ್ದೆ
ದೃಷ್ಟಿಯಿಂದಲಿ ನಾನು ಕಂಡೆ ಸೃಷ್ತಿಗೀಶನೆ ಶ್ರೀರಂಗಶಾಯಿ ||||

ಎಂಟು ಏಳನು ಕಳೆದುದರಿಂದೆ
ಬಂಟರೈವರ ತುಳಿದುದರಿಂದೆ
ಕಂಟಕನೊಬ್ಬನ ತರಿದುದರಿಂದೆ
ಬಂಟನಾಗಿ ಬಂದೆನೊ ಶ್ರೀರಂಗಶಾಯಿ || 1 ||

ವನ ಉಪವನಗಳಿಂದ
ಘನ ಸರೋವರಗಳಿಂದ
ಕನಕ ಗೋಪುರಗಳಿಂದ
ಘನಶೊಭಿತನೆ ಶ್ರೀರಂಗಶಾಯಿ || 2 ||

ವಜ್ರ ವೈಡೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ || 3 ||

ರಂಭೆ ಊರ್ವಶಿಯರ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ರಂಗಶಾಯಿ || 4 ||

ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವ ಶ್ರೀರಂಗಶಾಯಿ    || 5 ||

ಕಂಡೆ ನಾ ತಂಡತಂಡದ ಹಿಂಡುದೈವ ಪ್ರಚಂಡ ರಿಪು
ಗಂಡ ಉದ್ದಂಡ ನರಸಿಂಹನ ಕಂಡೆನೈಯ್ಯ ||||

ಘುಡಿಘುಡಿಸಿ ಕಂಬದಲಿ ಧಡ ಧಡ ಸಿಡಿಲು ಸಿಡಿಯೆ
ಕಿಡಿಕಿಡಿಸೆ ನುಡಿಯಡಗಲೊಡನೆ ಮುಡಿವಿದುದು
ಘಡಘಡನೆ ನಡುನಡುಗೆ ಘುಡುಘುಡಿಸಿ ಸಭೆ ಬೆದರೆ
ಹಿಡಿಹಿಡಿದು ಹಿರಣ್ಯಕನ ತೊಡೆಯೊಳಿಡೆ ಕೆಡಹಿದನ ||||

ಉರದೊಳಪ್ಪಳಿಸಿ ಆರಿ ಬಸಿರ ಸರಸರನೆ ಸೀಳಿ
ಪರಿಪರಿಯಲಿ ಚರ್ಮ ಎಳೆದೆಳೆದು ಎಲುವು ನರ
ನರವನು ತೆಗೆದು ನಿರ್ಗಳಿತ ಶೋಣಿತ ಸುರಿಯೆ
ಹರಿಹರಿದು ಕರುಳ ಕರುಳೊಳಿಟ್ಟವನ ||||

ಪುರಜನರು ಹಾಯೆನಲು ಸುರರು ಹೂಮಳೆಗರೆಯೆ
ತರತರದ ವಾದ್ಯಸಂಭ್ರಮಗಳಿಂದ
ಹರಿಹರಿ ಶರಣೆಂದು ಸ್ತುತಿಸಿ ಶಿಶು ಮೊರೆಯಿಡುವ
ಕರುಣಾಳು ಕಾಗಿನೆಲೆಯಾದಿಕೇಶವನ ||||
  

ಲಾಲಿ ಶ್ರೀ ಹಯವದನ ಲಾಲಿ ರಂಗವಿಠಲ
ಲಾಲಿ ಗೋಪಿನಾಥ ಲಕ್ಷ್ಮೀ ಸಮೇತ... ಲಾಲಿ.

ಮುತ್ತು ಮಾಣಿಕ್ಯ ಬಿಗಿದ ತೊಟ್ಟಿಲೊಳಗೊಲ್ಲ
ಎತ್ತಿದರು ಎನ್ನಯ್ಯ ಕೈಯೊಳಗೆ ನಿಲ್ಲ
ಭಕ್ತರಿಗೆ ವರಗಳನು ಕೊಡುವ ಹೊತ್ತಿಲ್ಲ
ಪುತ್ರನಾ ಎತ್ತಿಕೋ ನಂದಗೋಪಾಲ... ಲಾಲಿ.

ಮನೆಯೊಳಗೆ ಇವನೀತ ಬಹುರಚ್ಚೆವಂತ
ಮನೆವಾರ್ತೆ ಯಾರು ಮಾಡುವರು ಶ್ರೀಕಾಂತ
ಗುಣಗುಣಗೊಳಗಿಪ್ಪ ಬಹು ಗುಣವಂತ
ಗುಣಭಗ್ನನಾಗನಿವ ಶ್ರೀ ಲಕ್ಷ್ಮೀಕಾಂತ... ಲಾಲಿ.

ಶ್ರೀ ರಾಂಬುನಿಧಿಯೊಳಗೆ ಸಜ್ಜೆಯೊಳಗಿರುವ
ಶ್ರೀ ರಮಣ ಭಕ್ತರಿಚ್ಚೆಗೆ ನಲಿದು ಬರುವ
ಕಾರುಣ್ಯ ಹಯವದನ ಕಾಯ್ದ ತುರುಕರುವ
ನಾರಿನೀರೆಯರೊಳು ಮೆರವ ಕಡು ಚೆಲುವ...ಲಾಲಿ. ||||
  

ಲಂಬೋದರ ರಕ್ತಾಂಬರಧರ ||||
ಅಂಬರಾಧೀಶ್ವರ ಗೌರಿಕುಮಾರ ||ಅ ಪ||

ಸಿಂಧುರ ವದನಾರವಿಂದ ಸುಂದರ
ವಿಘ್ನಾಂಧಕಾರ ಶರಚ್ಚಂದಿರ ಧೀರ ||||

ವರ ಪಾಶಾಂಕುಶ ದಂತ ಧರ ಸುಮೋಹಕ
ಶೂರ್ಪಕರಣ ತ್ವಚ್ಛರಣ ಪಂಕಜಕಾ ನಮಿಪೆ ||||

ಜಗನ್ನಾಥವಿಠಲನ ಮಗನಾಗಿ ದ್ವಾಪರ
ಯುಗದಲಿ ಜನಿಸಿದ ಸುಗುಣ ನೀ ಸಲಹೋ ||||
 

No comments:

Post a Comment